Monday, July 13, 2009

ಹೀಗಲ್ಲ-೬

.."the best smell in the world is that man that you love.."
ಈ ನುಡಿಗಟ್ಟು ಅದೆಷ್ಟೋ ಸಲ ನನ್ನನ್ನು ಹಿಂಬಾಲಿಸಿದೆ.
ಎಂತ ಮಾತು! ಪ್ರೀತಿಸಿದವರಿಗೆಲ್ಲಾ ಈ ಮಾತು ಹಿತವಾಗಿ ಬಂದು ಹಿಡಿದುಕೊಳ್ಳುತ್ತದೆ.ನೀವೊಬ್ಬರು ಹುಡುಗೀನಾ ಪ್ರೀತಿಸಿದಿರಿ ಅಂತ ಆರಂಭಿಸೋಣ.ಪ್ರೀತಿ ಎಂದರೆ ದ್ರವ್ಯ.ದ್ರವ್ಯ ಎಂದರೆ ದ್ರವಿಸೋದು ಎಂದೂ ಅರ್ಥ.ಅಂದರೆ ಪ್ರೀತೀನಾ ಹಿಡಿದಿಟ್ಟುಕೊಳ್ಳಲಾಗುವುದಿಲ್ಲ.ಅದು ಹರಿಯುತ್ತಾ ಇರಬೇಕು..ಹಾಗೇ ಹರಿಯೋ ಪ್ರೀತಿ ಒಂದು ಹಂತದಲ್ಲಿ ನಿಂತು ಬಿಡುತ್ತದೆ..
ಏನೆಂದೆ?
ಅರ್ಥವಾಯಿತೇ?
ನೀವು ಪ್ರೇಮಿಯಾಗಿದ್ದರೆ ಮಾತ್ರಾ ಈ ಮಾತು ಅರ್ಥವಾಗುತ್ತದೆ.
ಮೊದಲ ಬಾರಿಗೆ ಆ ಸನಿಹದಲ್ಲಿ ನೀವು ಆಸ್ವಾದಿಸಿದ ನಿಮ್ಮ ಪ್ರಿಯಕರನ ಬಾಡಿ ಸ್ಪ್ರೇ ನಿಮ್ಮನ್ನು ಅದು ಎಷ್ಟು ಕಾಲ ಕಾಡುತ್ತದೆ ಎಂದರೆ ನಿಮಗೆ ಮುಂದೊಮ್ಮೆ ನಿಮ್ಮ ಗೆಳೆಯನ ವಿಯೋಗವಾಗಿ ನೀವು ಇನ್ಯಾರನ್ನೋ ಮದುವೆಯಾಗಿ ಅವನ ತೆಕ್ಕೆಯಲ್ಲಿ ನೀವಿದ್ದಾಗ ಆ ಬಾಡಿ ಸ್ಪ್ರೇ ಅದೇ ಆಗಿದ್ದರೆ..
ಅಲಾಸ್!!!
ಮತ್ತೆ ಮತ್ತೆ ಕಾಡುವ ಆ ಸುವಾಸನೆ..
ಅದರಲ್ಲಿ ಅರಳಿ ನಿಂತ ನಿಮ್ಮ ಹುಡುಗ॒
ಈ ವಿಚಾರ ಹುಡುಗನಿಗೂ ಅನ್ವಯವೇ.ಮುಖ ಒರಸಿಕೊಳ್ಳಲು ಹುಡುಗಿಯ ಕರ್ಚೀಫ್ ತೆಗೆದುಕೊಂಡ ಹುಡುಗನಿಗೆ ಆ ಪುಟ್ಟ ಕರವಸ್ತ್ರದಲ್ಲಿ ಏನೋ ಹುದುಗಿದೆ.ಅದು ಅವನ ಜಗತ್ತು..ಇನ್ನೊಬ್ಬರಿಗೆ ಏಕೆ ಆ ಹುಡುಗಿಗೂ ಅದು ಕೇವಲ ಟವಲ್ಲು..
ಆ ಸೋಪನ್ನೇ ಏಕೆ ಬಳಸುತ್ತೀರಿ ಎಂದು ಕೇಳಿದರೆ ಅದರ ನೊರೆಯಲ್ಲಿ ಅವಳ ಕಂಡೆ ಎನ್ನುವ ಹುಡುಗ ಅಥವಾ ಆ ಸ್ಮೆಲ್ಲಲ್ಲಿ ನನ್ನ ಇನಿಯ ಎಂದ ಹುಡುಗಿ..
ಅಯ್ಯಯ್ಯೋ!॒!!!!!!!!!!

4 comments:

  1. ಇಳಾ ಮೇಡಮ್,
    ನಿಮ್ಮ ಬ್ಲಾಗಿನ ಲೇಖನ ಬಲೇ ವಿಭಿನ್ನವಾಗಿದೆಯಲ್ಲ ಸ್ವಲ್ಪ ನೇರವಾಗು ಇದೆಯಲ್ಲಾ...ಉಳಿದ ಲೇಖನಗಳನ್ನು ಬಿಡುವಿನಲ್ಲಿ ಓದುತ್ತೇನೆ...

    ReplyDelete
  2. ಇನ್ನೂ ಪ್ರೀತಿ ಮಾಡಿಲ್ಲ ಅದಕ್ಕೆ ನಂಗೆ ಅರ್ಥ ಆಗಿಲ್ಲ!

    ReplyDelete
  3. I like the way you are expressing your thoughts. When you find some time visit my blog

    http://www.prashanthkannada.blogspot.com/

    ReplyDelete