Sunday, August 9, 2009

ಮರಳಿ ಬಂದಿದ್ದೇನೆ

ಬ್ಲಾಗಲ್ಲಿ ಹೆಚ್ಚು ಉದ್ದಕ್ಕೆ ಬರೆಯಬಾರದು,ಯಾರೂ ಓದಲ್ಲ ಎಂದಿದ್ದಳು ಸಾಹಿತ್ಯ.ಹಾಗೇಕೆ ಎಂದೆ ಪೆದ್ದು ಪೆದ್ದಾಗಿ.
ಕತ್ತೆ ನಿನಗೆ ಗೊತ್ತಿಲ್ಲ,ಇದು ಇಂಡಿಯಾ ಅದರಲ್ಲೂ ಕರ್ನಾಟಕ..ಬಹಳ ಹೊತ್ತು ಓದೋದಕ್ಕೆ ಯಾರಿಗೂ ಬಿಡುವು ಇರೋದಿಲ್ಲ..
ಹಾಗಾದರೆ ಭೈರಪ್ಪನವರ ಕಾದಂಬರಿಯನ್ನು ಯಾರು ಓದ್ತಾರೆ ಎಂದು ಕೇಳಿದರೆ,
ತರಲೆ..ಸೀದಾ ಮಾತನಾಡು..ಬ್ಲಾಗ್ ಓದೋರು ಟೈಂಪಾಸ್ ಪ್ರಿಯರು..ಅವರಿಗೆ ಕಡ್ಲೆಕಾಯಿ ತಿಂದಷ್ಟೇ ಅನುಭವ ಬ್ಲಾಗ್ ಬರಹ ಎಂದಳು..
ಎಷ್ಟು ದೊಡ್ಡ ಬರೆದರೆ ಸಾಕು ಎಂದು ಕೇಳಿದೆ.
ಭರ್ತಿ ಮುನ್ನೂರು ಶಬ್ದ..ಅಲ್ಲಿಗೆ ಎಂಡ್ ಮಾಡು ಎಂದಳು.
ಕಮೆಂಟ್ಸ್ ಬೇಕಾ ಎಂದೆ..
ನಾನು ನೀನು ಬರೆಯೋದರಿಂದ ಬೇಕು ಎಂದಳು..ಹಾಗೆಂದರೆ ಎಂದು ಕೇಳಿದರೆ,ಹುಡುಗೀರು ಬ್ಲಾಗ್ ಬರೆದರೆ ಭಲೇ ಕಮೆಂಟ್ಸ್ ಬರುತ್ತೆ..ಎಲ್ಲಾರೂ ಪ್ರತಿಕ್ರಿಯೆ ಮಾಡ್ತಾರೆ ಎಂದಳು..
ಹುಡುಗರು..ಎಂದೆ
ಶಟ್‌ಅಪ್ ಎಂದಳು..
ಮತ್ತೆ ಅಮೆರಿಕಾಕ್ಕೆ ಯಾಕೆ ಹೋದೆ?ಎಂದಳು ಸಾಹಿತ್ಯ..
ನಾನು ಅದನ್ನು ವಿವರಿಸುತ್ತಾ ವಿವರಿಸುತ್ತಾ ಹೋಗುತ್ತಿದ್ದೆ..ಅವಳು ಕಾರು ಓಡಿಸ್ತಾ ಇದ್ದಾಳೆ..
ನ್ಯೂಯಾರ್ಕ್‌ನಿಂದ ಸೀದಾ ಬಂದಿಳಿದದ್ದು ಬೆಂಗಳೂರಲ್ಲಿ..ನಿನ್ನೆಯಷ್ಟೇ..
ನಾಳೆ ಊರಿಗೆ ಹೊರಡೋಣ ಎಂದುಕೊಂಡಿದ್ದೇನೆ..ಯಾರಾದರೂ ಬ್ಲಾಗ್ ಸ್ನೇಹಿತರು ಸಿಗುತ್ತಾರಾ ಅಂತ ನೋಡಬೇಕು..ಬಹುತೇಕ ಯಾರನ್ನೂ ಪರಿಚಯ ಆಗಿಲ್ಲ.ಏಕೆಂದರೆ ನಾನು ಬ್ಲಾಗ್ ಲೋಕಕ್ಕೇ ಹೊಸಬಳು..
ಏನಮ್ಮಾ ಇದು ಮೂರ್ತಿ ಗಲಾಟೆ ಎಂದೆ.
ನಿನ್ನಜ್ಜಿ..ಎಂದು ಅವಳು ಸರ್ವಜ್ಞ,ತಿರುವಳ್ಳರ್ ಬಗ್ಗೆ ಹೇಳಿದಳು.
ಮೂರ್ತಿ ಇಡದಿದ್ದರೆ ಏನಾಗುತ್ತದೆ ಎಂದಳು..
ಇಟ್ಟರೆ ಏನು ಬರುತ್ತೆ ಹೇಳು ಎಂದೆ..
ಏನಿಲ್ಲಾ..ಭಾಷೆ,ಸಂಸ್ಕೃತಿ ಒಂದಾಗುತ್ತದೆ ಎಂದಳು..
ಸುಮ್ಮನೇ..ಇದೆಲ್ಲಾ ರಾಜಕೀಯ ಅಷ್ಟೇ..ಸರ್ವಜ್ಞ ಕಾಲಾತೀತ..ತಿರುವಳ್ಳರ್ ಅವನಂತೆ ಮತ್ತೊಬ್ಬ.ಇವರ ಮೂರ್ತಿ ಇಟ್ಟರೂಂತ ತಮಿಳುನಾಡು ಕರ್ನಾಟಕ ಒಂದಾಗೋದಿಲ್ಲ.ಇಡದಿದ್ರೆ ಏನೂ ಊರು ಕಿತ್ತು ಹೋಗೋದಿಲ್ಲ..
ಅದು ವಾಜಪೇಯಿ ಕರಾಚಿಗೆ ಬಸ್ಸು ಹಾಕಿದ ಹಾಗೇ ಅಷ್ಟೇ ಎಂದೆ.
ನೀನು ಅಮೇರಿಕಾದಲ್ಲಿ ಹುಟ್ಟಿ ಬೆಳೆದೋಳು..ನಿನಗೆ ಇಂಡಿಯಾದ ನಾಡಿ ಗೊತ್ತಿಲ್ಲ..ಎಂದು ಬೈದಳು ಸಾಹಿತ್ಯ॒
ನಾನು ಅವಳ ಮನೆಗೆ ಬಂದವಳೇ ಸ್ನಾನ ಮುಗಿಸಿ ಇಡ್ಲಿ ತಿಂದು ಅವಳ ಬೆಡ್‌ರೂಮಲ್ಲಿ ಹೊದ್ದು ಮಲಗಿದೆ..ಏಸಿ ಛಳಿಗೆ ಮತ್ತೊಂದು ರಗ್ಗು ಮೈಮೇಲೆ ಎಳೆದುಕೊಂಡು..
ಅಮೇರಿಕಾದಿಂದ ಇಪ್ಪತ್ತನಾಲ್ಕು ವರ್ಷದ ಹುಡುಗಿ ಒಬ್ಬಳೇ ವಿಮಾನದಲ್ಲಿ ಬರೋವಾಗ ಏನಾಯಿತು ಎಂದು ಇನ್ನೊಮ್ಮೆ ಹೇಳುತ್ತೇನೆ ಮಜಾ ಇದೆ.

6 comments:

  1. ಇಳಾ,
    ಕಾಮೆಂಟಿಸುವುದಕ್ಕೆ ಮುನ್ನ ಒಂದು ಸಮಜಾಯಿಷಿ...
    ಇದು ಹುಡುಗಿಯೊಬ್ಬಳ ಬ್ಲಾಗು ಎನ್ನುವುದನ್ನು ಮನದಲ್ಲಿ ಇಟ್ಟುಕೊಂಡು ಕಾಮೆಂಟಿಸುವವರು ಇರಬಹುದೇನೋ, ಆದರೆ ಖಂಡಿತ ಅಂತಹವರ ಸಂಖ್ಯೆ ಖಂಡಿತ ವಿರಳ. ಈ ಬಾಗು ಜಗತ್ತು ಕೂಡ ಸ್ವಾರಸ್ಯಕರ ಮತ್ತು ಆಸ್ವಾದಿಸಬಹುದಾದ ಎಲ್ಲ ಬರಹಗಳಿಗೂ ನಿಜಕ್ಕೂ ಸ್ಪಂದಿಸುತ್ತದೆ ಮತ್ತು ಪ್ರತಿಕ್ರಿಯಿಸುತ್ತದೆ. ಇದು ನನ್ನ ಸ್ವಂತ ಅನುಭವ.
    ಇನ್ನು ಮೂರ್ತಿ ಪ್ರತಿಷ್ಟಾಪನೆ ವಿಚಾರಕ್ಕೆ ಬಂದರೆ ಬಹುಶಃ ಇದು ನಮ್ಮ ಸರ್ಕಾರಗಳು ಭವಿಷ್ಯಕ್ಕೆ ಇರಲಿ ಎಂಬಂತೆ ಒಂದು ಸಮಸ್ಯೆಗೆ ತಳಹದಿ ಹಾಕುತ್ತಿರುವಂತಿದೆ. ಒಂದು ಪಕ್ಷ ಮೂರ್ತಿ ಪ್ರತಿಷ್ಟಾಪನೆ ಯಶಸ್ವಿಯಾದರು, ಮುಂದೊಂದು ದಿನ ಕನ್ನಡಿಗರು-ತಮಿಳರ ನಡುವೆ ಕಲಹಕ್ಕೆ ಮೂರ್ತಿಯೆಡೆಗೆ ಒಂದು ಚಿಕ್ಕ ಕಲ್ಲೆಸೆದು ದೊಡ್ಡ ಕದನಕ್ಕೆ ಅಡಿಯಿಡಬಹುದಲ್ಲ, ಕಿಡಿಗೇಡಿಗಳಿಗೆ ಅವಕಾಶ ಒದಗಿಸಿ ಕೊಡುತ್ತಿದೆ ಸರ್ಕಾರ. ಈಗ ಅಂಬೇಡ್ಕರ್ ಮೂರ್ತಿಯ ವಿಚಾರದಲ್ಲಿ ನಡೆಯುತ್ತಿರುವುದು ಇದೆ ಅಲ್ವಾ.

    ReplyDelete
  2. ಏನೋ, ಪ್ರತಿ ಲೇಖನದಲ್ಲೂ ಕುತೂಹಲ ಮೂಡಿಸಬೇಕು ಅಂತ ಅನಗತ್ಯ ವಿಷಯಗಳನ್ನು ತುರುಕಿರೋ ಹಾಗಿದೆ.. ಅದು ಏನಾದರೂ different ಆಗಿ ಬರೀಬೇಕು ಅನ್ನೊ ತುಡಿತದಲ್ಲಿ ಆಗಿರೋ ಆಭಾಸಗಳೇನೊ. ಅದನ್ನು ಬಿಟ್ರೆ ಲೇಖನಗಳೂ ಚೆನ್ನಾಗಿವೆ..ಓದಿಸಿಕೊಂಡು ಹೋಗುತ್ತವೆ :-).
    == ಅಮೇರಿಕಾದಿಂದ ಇಪ್ಪತ್ತನಾಲ್ಕು ವರ್ಷದ ಹುಡುಗಿ ಒಬ್ಬಳೇ ವಿಮಾನದಲ್ಲಿ ಬರೋವಾಗ ಏನಾಯಿತು ಎಂದು ಇನ್ನೊಮ್ಮೆ ಹೇಳುತ್ತೇನೆ ಮಜಾ ಇದೆ.

    ಇದು ಒಳ್ಳೆ ”ಹಾಯ್ ಬೆಂಗಳೂರು” ಪತ್ರಿಕೆಯ ಮುಖಪುಟದಲ್ಲಿ ಕುತೂಹಲ ಹುಟ್ಟಿಸೊಕ್ಕೆ ಹಾಕೊ headline ತರ ಇದೆ...ಒಳಗೆ ಹೋಗಿ .ನೋಡಿದರೆ ಏನೂ ಸ್ವಾರಸ್ಯ್ವಿರಲ್ವಲ್ಲ ಹಾಗೆ.. :-) ಏನೋ ಹಾಗೆ ಅನ್ನಿಸ್ತು .

    ReplyDelete
  3. ನನ್ನದೂ ಸಹಮತಿ ಇದೆ ರಾಜೇಶ್ ಮಾತಿಗೆ.

    ಬೆರೆ ಎಲ್ಲಾ ಕಡೆ ಹುಡುಗಿಯರು ಅಂದ್ರೆ soft corner ಇರ್ಬಹುದೇನೋ ಆದ್ರೆ ಬ್ಲಾಗ್ ಲೋಕದಲ್ಲಿ ಖಂಡಿತ ಇಲ್ಲ!

    ಇಲ್ಲಿ ಬರೆದಿದ್ದು ಚೆನ್ನಾಗಿದ್ರೆ ಎಲ್ರೂ ಮೆಚ್ಚೇ ಮೆಚ್ತಾರೆ.

    ReplyDelete
  4. ಹಲೋ ನಾಪತ್ತೆಯಾಗಿ ಹೋದ್ರಾ???

    ReplyDelete