Thursday, July 9, 2009

ಹೀಗಲ್ಲ-೩

ಸಾಮಾನ್ಯವಾಗಿ ನಾನು ಸ್ವದೇಶಕ್ಕೆ ಮರಳಿದ ಮೇಲೆ ಕಾರು ಯೂಸ್ ಮಾಡೋದು ಕಡಿಮೆ.
ಅಷ್ಟು ವರ್ಷ ಅಮೇರಿಕಾದಲ್ಲಿ ಇದ್ದೆನಲ್ಲ,ಅಲ್ಲಿ ಕಾರು-ಬಾರು ಅತಿಯಾಗಿ ಹೋಗಿತ್ತು.ಕಾರು ಅಲ್ಲಿ ಅನಿವಾರ್ಯ,ಇಲ್ಲಿ ಅಗತ್ಯ ಏನಲ್ಲ ಅಂತ ನನಗೆ ಗೊತ್ತಾಗಿತ್ತು.
ಅಮೇರಿಕಾದಲ್ಲಿ ನಾನು ಕಾರು ಡ್ರೈವ್ ಮಾಡೋ ಕ್ರೇಜಿ ಎಷ್ಟಿತ್ತೆಂದರೆ ಒಮ್ಮೆ ಟೆಕ್ಸಾಸ್‌ಗೆ ಏಳುನೂರು ಮೈಲಿ ಒಬ್ಬಳೇ ಡ್ರೈವ್ ಮಾಡ್ತಾ ಹೋಗಿದ್ದೆ.ಪರಮಾನಂದ ಅಂದರೆ ಅದು..
ಈ ನೆಲದಲ್ಲಿ ಕಾರಲ್ಲಿ ಕೂತು ಹೋದರೆ ಏನನ್ನೋ ಕಳೆದುಕೊಂಡಂತೆ..
ಬಸ್ಸಿನಲ್ಲಿ ಹೋಗೋದೇ ಒಂದು ಖುಷಿ..ಜನ ಅವರ ಮಾತು ಕಂಡಕ್ಟರ್ ಜೊತೆ ಜಗಳ,ನೂಕು ನುಗ್ಗಲು,ನನ್ನಂಥ ಜೀನ್ಸ್ ಹಾಕಿದ ಹುಡುಗೀನ ಕಂಡರೆ ಹತ್ತಿರ ಬರಲು ಇನ್ನಿಲ್ಲದ ಪಾಡು ಪಡೋ ಪಡ್ಡೆಗಳು ಅದರಲ್ಲೂ ಮಾತನಾಡಿಸಲು ಮುಂದಾಗೋ ಫಾರ್ಟಿಪ್ಲಸ್‌ಗಳು..
ಬಸ್ಸು ಎಂಬ ಮೊದಲ ವಾಹನಕ್ಕೆ ನಮೋನಮಃ
ಹೀಗೆ ನಾನು ನಿನ್ನೆ ಬಸ್ಸಲ್ಲಿ ಹೋದದ್ದು ನನ್ನ ಅಜ್ಜಿಮನೆಗೆ.ಅಜ್ಜಿ ಸಖತ್ ಹಾಟ್ ಮಗಾ ಆಗಿದ್ದಾರೆ ಅಂತ ನನ್ನ ಸೋದರಮಾವ ಜ್ವರವನ್ನು ಕಿಂಡಲ್ ಮಾಡಿದ್ದ. ಎಂಭತ್ತು ಕಿಲೋಮೀಟರ್ ಪಯಣ.ಜೊತೆಗೆ ಯಾರಾದರೂ ಇದ್ದರೆ ಮಾತಿಗೆ ಹಚ್ಚಬಹುದಿತ್ತೋ ಏನೋ ಅಂತಾಸೆ.
ಅಷ್ಟರಲ್ಲೇ ಪಕ್ಕಕ್ಕೆ ಕುಳಿತವಳು ನನ್ನದೇ ಹರೆಯದ ಹುಡುಗಿ.ಸಲ್ವಾರ್‌ಕಮೀಜ್ ಸೆಟ್ ಮಾಡ್ಕೊಳ್ಳೋದಕ್ಕೆ ಪಾಡುಪಡ್ತಾ ಇದ್ದಳು.
ನಾನೇ ಮಾತಿಗೆಳೆದೆ.
ಟೀಚ್ ಮಾಡ್ತಾ ಇದ್ದಾಳಂತೆ.ಅಚ್ಚ ಕನ್ನಡದಲ್ಲೇ ಶುರು ಮಾಡಿದಳು.ಏನ್ ಸಬ್ಜೆಕ್ಟು ಎಂದರೆ ಕೆಮೆಸ್ಟ್ರೀ ಎಂದಳು.
ಮಾತಾಡ್ತಾ ಮಾತಾಡ್ತಾ ಯಾವಾಗ ನಾನು ಅಮೇರಿಕಾದಿಂದ ಬಂದೆ ಅಂತ ಗೊತ್ತಾಯಿತೋ..ಶುರು ಮಾಡಿದಳು ಇಂಗ್ಲೀಷ್ ಭಾಷಣ.ಕನ್ನಡ ಬೆರೆಸಿ ಬೆರೆಸಿ ಅವಳು ಇಂಗ್ಲೀಷ್ ಮಾತಾಡ್ತಾ ಇದ್ದಾಗ ನನಗೆ ಈ ಹುಡುಗಿಗೂ ಅಮೇರಿಕಾದ ಆಸೆ ಅಂತ ಗೊತ್ತೇ ಆಗಿಬಿಡ್ತು..
ಕೇಳಿಯೇ ಬಿಟ್ಟೆ.
ಹೂಂ ಅಂದಳು..
ಅವಳು ಅಷ್ಟು ಸಣ್ಣ ಪ್ರಯಾಣದಲ್ಲಿ ಅಮೇರಿಕಾದ ಬಗ್ಗೆ ನನ್ನಿಂದ ಬಗೆಬಗೆಯ ಭ್ರಮೆಗಳನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರೋದು ನನಗೆ ಅರ್ಥವಾಗುತ್ತಿತ್ತು.
ಆ ಹುಡುಗೀಗೆ ಅಮೇರಿಕಾದಲ್ಲಿ ವಾಸಿಸೋ ಅವಕಾಶವನ್ನು ಆ ದೇವರು ಮಾಡಲಿ..ಇಂಡಿಯಾದ ಟೀನ್ ಪ್ಲಸ್‌ಗಳೆಲ್ಲಾ ಈ ರೀತಿ ಆಸೆ ಪಡೋದು ತಪ್ಪೇನಲ್ಲ ಅಂತ ನನಗೆ ಗೊತ್ತಿದೆ.ಮೈನಸ್ ಫಾರ್ಟಿ ವಾತಾವರಣದಲ್ಲಿ ಆಕೆ ಬಾಳಿ ಬದುಕಲಿ..
ಏನ್ ಆಸೇನೋ..ಕದವಿಕ್ಕಿ ಬೆತ್ತಲು ಬೋರಲಾಗಿ ಕಣ್ಣ್‌ಮುಚ್ಚಿ ಕತ್ತಲಲ್ಲಿ ಕನಸು ಕಾಣಲೂ ಆಗದ ನೆಲದ್ದು..

2 comments:

  1. ಇಳಾ,
    ನಿಜವಾದ ಮಾತು. ಬರವಣಿಗೆಯ ಲಹರಿ ಇಷ್ಟವಾಯಿತು. ನಮ್ಮೂರು ಅಂದರೆ ಎಂದಿಗೂ ನಮಗೆ ಒಂದು ಹಿಡಿ ಪ್ರೀತಿ ಹೆಚ್ಚೇ ಅಲ್ಲವೇ.

    ReplyDelete
  2. ಮೇಲಿನ ಕಮೆ೦ಟಿನಲ್ಲೇ ಹೇಳಿದ ಹಾಗೆ ನಿಮ್ಮ ಬರವಣಿಗೆಯ ಶೈಲಿ ವಿಭಿನ್ನವಾಗಿದೆ... ನೋಡ್ತಾ ಇರಿ... ನಿಮ್ಮ ಬ್ಲಾಗ್ ತು೦ಬಾ famous ಆಗುತ್ತೆ ಅತಿ ಬೇಗ...

    ReplyDelete