Tuesday, July 7, 2009

ಹೀಗಲ್ಲ..1

ಡಿಫೆರೆಂಟಾಗಿ ಯೋಚಿಸಬೇಕು..ಗೇ ಸೆಕ್ಸ್‌ಗೆ ಲೈಸೆನ್ಸ್ ಸಿಕ್ಕರೆ ನಮಗೇಕೆ ಕೋಪ ಅಥವಾ ಅಸಹ್ಯ..
ಸೆಕ್ಸ್ ಅಂದರೆ ಅದು ತೀರಾ ಪರ್‌ಸನಲ್..ಅದು ಅವರವರ ಇಷ್ಟ..ಅಥವಾ ಅನಿಷ್ಟ..
ಕಾಮ ಬೇರೆ ಪ್ರೀತಿ ಬೇರೆ..
ಅದನ್ನು ಅರ್ಥ ಮಾಡ್ಕೋಬೇಕಾದರೆ ಸುಮ್ಮನೇ ಫ್ಲೆಕ್ಸ್ ಬಾಗಿಲಲ್ಲಿ ನಿಂತು ನೋಡಬೇಕು..ಟಿಕೇಟಿಗೆ ಸಾವಿರ ರೂಪಾಯಿ ,ಕೋಕ್‌ಗೆ ಮುನ್ನೂರು..ಸ್ನಾಕ್‌ಗೆ ಅರ್ಧ ಸಾವಿರ ..ಕೊನೆಗೆ ಹೊರಗೆ ಬಂದಾಗ ಎರಡೂವರೆ ಸಾವಿರಕ್ಕೆ ಕಮ್ಮಿಯಿಲ್ಲ ಅಷ್ಟೂ ಖಾಲಿ..
ನೋಡಿದ್ದು ಅದೇ ಸಿನಿಮಾ,,
ಸಿನಿಮಾ ನೋಡುತ್ತಾರಾ..ಶಟ್‌ಅಪ್..
ಅದೊಂದು ಸಿಂಪಲ್ ನೆಪ ಅಷ್ಟೇ..
ಅವನ ಕೈ ಅವಳ ಮೇಲೆಲ್ಲಾ ಹರದಾಡಿ..ಅವಳ ಮೈ ಬಿಸಿಯಾಗಿ..ಅವನು ಕಾದ ಕಬ್ಬಿಣ ಅವಳು ಕರಗಿ ಕುಲುಮೆ..
ಇದನ್ನು ಪ್ರೀತಿ ಅಂತಿರೋಕಾ॒ಮ ಅಂತೀರೋ..
ಗೊತ್ತಿಲ್ಲ..
ಇದೂ ಪ್ರೀತಿ ಥರಾ ಇರೋ ಕಾಮ ಅಥವಾ ಕಾಮದ ಪ್ರೀತಿ..
ಕಾಫಿಡೇನಲ್ಲಿ ಅಮೇರಿಕಾದಿಂದ ವಾಪಾಸ್ಸು ಬಂದ ಬ್ಯಾಚುಲರ್ ಬಾಯ್ ಜೊತೆ ಕುಳಿತ ಮೊನ್ನೆ ಮೊನ್ನೆ ಮದುವೆ ಆದ ಹುಡುಗಿಗೆ ಗಂಡನ ನೆನಪಾದರೆ ಅದು ಪ್ರೀತಿನೂ ಅಲ್ಲಾ ಕಾಮನೂ ಅಲ್ಲಾ..
ಅದನ್ನು ಹುಡುಕಾಟ ಅನ್ನುತ್ತಾರಾ..
ಅದೂ ಗೊತ್ತಿಲ್ಲ..
ಸಲಿಂಗ ಕಾಮ ಅಂದರೆ ಏನು? ಅದನ್ನು ಕಾನೂನು ಮಾಡಿದರೆ ಎಲ್ಲಾ ಹುಡುಗೀರೂ ಹುಡುಗರನ್ನ ಬಿಟ್ಟು ಹೋಗುತ್ತಾರಾ..ಅಥವಾ ಹುಡುಗರು ಹುಡುಗೀರನ್ನು ದೂರ ತಳ್ತಾರಾ..
ಇಂಪಾಸಿಬಲ್..
ಸಾಧ್ಯವೇ ಇಲ್ಲ..ಹುಡುಗಿಯ ಆಕರ್ಷಣೆ ಹುಡುಗ ಸಹಜ..ಹಾಗೇ ಹುಡುಗನ ಆಸೆ ಹುಡುಗಿ ಸಹಜ..
ಹಾಗಾದರೆ ಈ ಗೇ ಸೆಕ್ಸ್..ಅದು ಆ ಥರದವರಿಗಿರಲಿ..ಕೋರ್ಟ್ ಯೆಸ್ ಅಂದರೆ ಎಲ್ಲರೂ ಗೇ ಆಗ್ತಾರಾ..
ಈ ಪಾಟಿ ಎದುರಾ ಬದುರಾ ಆಸೆಗಳು ಕುದಿಯುತ್ತಿರುವಾಗ..

3 comments:

  1. ಹೌದು, ಕರೆಕ್ಟಾಗಿ ಹೇಳಿದ್ರಿ, ಡಿಫರೆಂಟಾಗಿ ಯೋಚಿಸ್ಬೇಕು. ಆಗ್ಲೇ ಯೋಚನೆಗಳಿಗೆ ಪೂರ್ಣ ರೂಪ ದೊರೆಯೋದು. Nice thinking...

    ReplyDelete
  2. ಇಳಾ ಅವರೇ...

    ಯಾರದ್ದೋ ಬ್ಲಾಗಿನಲ್ಲಿ ನಿಮ್ಮ ಬ್ಲಾಗಿನ ಲಿ೦ಕು ದೊರತು ಅದರ ಜಾಡು ಹಿಡಿದು ಬ೦ದಿದ್ದಕ್ಕೆ ಏನೂ ನಷ್ಟವಾಗಲಿಲ್ಲ... ತು೦ಬಾ ಇಷ್ಟವಾಯಿತು ಬರಹಗಳು...
    "ಗೇ" ಬಗ್ಗೆ ನಿಮ್ಮ ಧೋರಣೆ ಹಿಡಿಸಿತು...

    ReplyDelete
  3. ’ಗೇ’ಗಳ ಬಗ್ಗೆ ಚೆನ್ನಾ’ಗೇ’ ಬರೆದಿದ್ದೀರ. ಹೀ’ಗೆ’ ಬರೀತಿರಿ.

    ReplyDelete